Home
ಬಂಗಾರಪೇಟೆ ಪುರಸಭೆಯ ಬಗ್ಗೆ:
ಬಂಗಾರಪೇಟೆ ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ತಾಲ್ಲೂಕು ಕೇಂದ್ರ.ಇದರ ಹಿಂದಿನ ಹೆಸರು ಮರಮೂಟ್ಲು ಎಂದಾಗಿದ್ದು ನಂತರ ಬೌರಿಂಗ್‌ಪೇಟೆ ಎಂದು ಬದಲಾಯಿಸಲಾಯಿತು.ಇದು ಆಂಧ್ರಪ್ರದೇಶ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೆ ಗಡಿಯನ್ನು ಹೊಂದಿದೆ.ಬಂಗಾರಪೇಟೆ ಪಟ್ಟಣವು ಬೆಂಗಳೂರಿನಿಂದ 80ಕಿ.ಮೀ ದೂರದಲ್ಲಿದೆ.
ಬಂಗಾರಪೇಟೆ ಪುರಸಭೆಯು 1920ರಲ್ಲಿ ಸ್ಥಾಪನೆಯಾಯಿತು.ನಗರದ ಜನಸಂಖ್ಯೆ 2001ರ ಸಮೀಕ್ಷೆಯಂತೆ 38,703.ನಗರದಲ್ಲಿ 23 ವಾರ್ಡುಗಳಿದ್ದು ಅಷ್ಟೇ ಸಂಖ್ಯೆಯ ಚುನಾಯಿತ ಪ್ರತಿನಿಧಿಗಳಿರುತ್ತಾರೆ.ನಗರವು 5.50ಚ.ಕಿ.ಮೀ ವ್ಯಾಪಿಸಿದೆ.ನಗರದಲ್ಲಿ ಒಟ್ಟು 7733 ಕುಟುಂಬಗಳಿದ್ದು ನಗರದ ಸಾಕ್ಷರತಾ ಪ್ರಮಾಣ 2001ರ ಸಮೀಕ್ಷೆಯಂತೆ 71.65% ಆಗಿದೆ.ನಗರದಲ್ಲಿ ಒಟ್ಟು 5 ಕೊಳಚೆಪ್ರದೇಶಗಳಿದ್ದು ಅವುಗಳಲ್ಲಿ 3 ಗುರುತಿಸಲ್ಪಟ್ಟ ಮತ್ತು 2 ಗುರುತಿಸಲ್ಪಡದೇ ಇರುವ ಕೊಳಚೆ ಪ್ರದೇಶಗಳಿವೆ.
About Bangarpet TMC:
Bangarpet is a town in Kolar district in the Indian state of Karnataka.It was originally called Maramootlu before it changed to Bowringpet, named after an officer working in the Kolar Gold Fields.It is bordered by both Andhra Pradesh and Tamil Nadu.It is at a distance of 80 kms from Bangalore.
The Town Municipal Council(TMC) Bangarpet was constituted in 1920. It has a population of 38,703 according to the census of 2001. The TMC has 23 Wards and equal number of Councilors. Bangarpet TMC stretches to an area of 5.50 sq.kms.The total no of households in the town is 7733 and the literacy rate as per 2001 census is 71.65%.The town has 5 slums; 3 declared and 2 undeclared.
ಪ್ಲಾಸ್ಟಿಕ್ ಬಳಕೆಯ ನಿಷೇಧ
ಪರಿಸರದ ಮೇಲೆ ತೀವ್ರ ದುಷ್ಪರಿಣಾಮ ಬೀರುವ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವ ಉದ್ದೇಶದಿಂದ ಪುರಸಭೆ ವ್ಯಾಪ್ತಿಯಲ್ಲಿ ದಿನಾಂಕ:20-09-2011 ರಿಂದ ನಲವತ್ತು ಮೈಕ್ರಾನ್‌ಗಳಿಗಿಂತ ತೆಳುವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ.
ಸಾರ್ವಜನಿಕರ ಗಮನಕ್ಕಾಗಿ
ಶೌಚಾಲಯಗಳ ಪಿಟ್ ಸ್ವಚ್ಛತೆಯನ್ನು ಕೆಲಸಗಾರರು ತಮ್ಮ ಕೈಗಳಿಂದ ಸ್ವಚ್ಛಗೊಳಿಸುವುದು ಅಪರಾಧವಾಗಿರುತ್ತದೆ. ಸದರಿ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು ಹಾಗೂ ಕೆಲಸ ಮಾಡಿಸುತ್ತಿರುವ ಮಾಲೀಕನನ್ನು ಕಾನೂನು ರೀತ್ಯಾ ಶಿಕ್ಷೆಗೆ ಒಳಪಡಿಸಲಾಗುತ್ತದೆ.
ಶೌಚಾಲಯಗಳ ಪಿಟ್‌ಗಳನ್ನು ಪುರಸಭೆಯಲ್ಲಿ ಲಭ್ಯವಿರುವ ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರದ ಮೂಲಕ ಸ್ವಚ್ಛಗೊಳಿಸಲಾಗುವುದು. ಸಾರ್ವಜನಿಕರು ಸಕ್ಕಿಂಗ್ ಯಂತ್ರದ ಅವಶ್ಯಕತೆ ಇದ್ದಲ್ಲಿ ದೂರವಾಣಿ ಸಂಖ್ಯೆ:08153-253222 ಗೆ ಸಂಪರ್ಕಿಸಬಹುದು ಅಥವಾ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಘಟಕದಲ್ಲಿ ತಮ್ಮ ದೂರನ್ನು ದಾಖಲಿಸಬಹುದು.
ಮನೆಗಳು/ವಾಣಿಜ್ಯ ಮಳಿಗೆಗಳಲ್ಲಿ(ಬಾಡಿಗೆ ಅಥವಾ ಸ್ವಂತ) ಶೇಖರಣೆಯಾಗುವಂತಹ ತ್ಯಾಜ್ಯವನ್ನು (ಹಸಿ & ಒಣ ಕಸವನ್ನು ಪ್ರತ್ಯೇಕವಾಗಿ) ಮನೆ ಮನೆ ಕಸ ಸಂಗ್ರಹಣೆದಾರರಿಗೆ ಖಡ್ಡಾಯವಾಗಿ ನೀಡತಕ್ಕದ್ದು ಹಾಗೂ ನಿಗದಿಪಡಿಸಿದ ಮಾಸಿಕ ಸೇವಾ ಶುಲ್ಕವನ್ನು ಖಡ್ಡಾಯವಾಗಿ ಪಾವತಿಸಬೇಕು. ಈ ಕಾರ್ಯದಲ್ಲಿ ಸಹಕರಿಸದಿರುವ ಸಾರ್ವಜನಿಕರ ಮೇಲೆ ಕರ್ನಾಟಕ ಪೌರಸಭೆಗಳ ನಿಯಮದಂತೆ ದಂಡ ವಿಧಿಸಲಾಗುವುದು.
ಬಂಗಾರಪೇಟೆ ಪುರಸಭಾ ವ್ಯಾಪ್ತಿಯಲ್ಲಿನ ಎಲ್ಲಾ ಖಾತೆದಾರರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ನಿಮ್ಮ ಖಾಲಿ ಜಾಗಗಳಲ್ಲಿ ಮುಳ್ಳುಗಿಡಗಳು, ಪಾರ್ಥೇನಿಯಂ ಗಿಡಗಳು, ಕಸಕಡ್ಡಿ, ಪ್ಲಾಸ್ಟಿಕ್ ಮತ್ತು ಘನತ್ಯಾಜ್ಯಗಳು ತುಂಬಿಕೊಂಡಿರುವುದರಿಂದ ವಿಷಭರಿತ ಕ್ರಿಮಿ-ಕೀಟಗಳು, ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಕಾರಣವಾಗಿದೆ.ಆದ್ದರಿಂದ ನಿಮ್ಮ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು & ಫೆನ್ಸಿಂಗ್ ಮಾಡಿಸಿಕೊಳ್ಳಲು ವಿನಂತಿಸಿದೆ. ತಪ್ಪಿದಲ್ಲಿ ಸೂಕ್ತಕ್ರಮ ತೆಗೆದುಕೊಳ್ಳಲಾಗುವುದು.
ಬಂಗಾರಪೇಟೆ ಪಟ್ಟಣದ ಎಲ್ಲಾ ಹಂದಿ ಸಾಕಾಣಿಕೆ ಮಾಡುತ್ತಿರುವ ಮಾಲೀಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಪಟ್ಟಣದಲ್ಲಿ ಹಂದಿ ಜ್ವರ(ಹೆಚ್1 ಎನ್1) ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಮ್ಮ ಹಂದಿಗಳನ್ನು ನಗರದಿಂದ 3 ಕಿ.ಮೀ ಹೊರಗೆ ಸಾಗಿಸಲು ಸೂಚಿಸಿದೆ. ತಪ್ಪಿದಲ್ಲಿ ಪುರಸಭೆಗಳ ನಿಯಮಾವಳಿ ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಸಕಾಲ ಯೋಜನೆ
ನಾಗರೀಕರಿಗೆ ನಿಗದಿತ ಕಾಲಮಿತಿಯೊಳಗೆ ಸೇವೆಗಳನ್ನು ನೀಡುವ ಕರ್ನಾಟಕ ನಾಗರೀಕ ಸೇವಾ ಖಾತರಿ ಅಧಿನಿಯಮ, 2011 ಅಥವಾ ಸಕಾಲ ಯೋಜನೆಯನ್ನು ಏಪ್ರಿಲ್ 2, 2012 ರಿಂದ ಜಾರಿಗೊಳಿಸಲಾಗಿದೆ.
ಸರ್ಕಾರದ ಸೇವೆಯನ್ನು ಪಡೆಯಲು ಬಯಸುವ ಸಾರ್ವಜನಿಕರಿಗೆ ಆ ಸೇವೆಯನ್ನು ನಿಗದಿತ ಸಮಯದೊಳಗೆ ಪಡೆಯುವ ಅಧಿಕಾರವಿದೆ. ಸೇವೆಗಳನ್ನು ಪಡೆಯಲು ಅನವಶ್ಯಕ ವಿಳಂಬವಾದಲ್ಲಿ ಅನಗತ್ಯ ತೊಂದರೆಯನ್ನು ಎದುರಿಸಬೇಕಾದ ಸಾರ್ವಜನಿಕರಿಗೆ ಸಂಬಂಧಿತ ಸರ್ಕಾರಿ ನೌಕರರು ಪರಿಹಾರ ಧನವನ್ನು ಕೊಡಬೇಕಾಗಿ ಬರುವುದು ಈ ಕಾನೂನಿನ ವೈಶಿಷ್ಟ್ಯವಾಗಿದೆ.
This Page is maintained by Chief Officer ¦ Last updated on:02-05-2013

